ಚಿತ್ತರಂಜನ ದಾಸ್(ನವೆಂಬರ್ ೨೫, ೧೮೭೦ - ಜೂನ್ ೧೬, ೧೯೨೫) ಅವರನ್ನು ಭಾರತದ ಜನತೆ ಪ್ರೀತಿಯಿಂದ ದೇಶಬಂಧು ಎಂದು ಕರೆದರು. ಸ್ವಾತಂತ್ರ ಚಳುವಳಿಯ ಪ್ರಮುಖರಲ್ಲಿ ಪ್ರಮುಖರಾದ ಇವರು ವೃತ್ತಿಯಿಂದ ವಕೀಲರಾಗಿದ್ದರು. ಇಂಗ್ಲೆಂಡಿನಲ್ಲಿ ಕಾನೂನನ್ನು ಅಭ್ಯಾಸ ಮಾಡಿದ ಇವರು ೧೯೦೯ರಲ್ಲಿ ನೆಡೆದ 'ಆಲಿಪುರ ಸ್ಪೋಟದಲ್ಲಿ' ಶ್ರೀ ಅರವಿಂದ ಘೋಷ್ ಅವರನ್ನು ನ್ಯಾಯಾಂಗದ ಆರೋಪದಿಂದ ಮುಕ್ತಗೊಳಿಸಿದರು.